Published 3 hours ago • loading... • Updated 3 hours ago
ವಾಟ್ಸಾಪ್ ಬಳಸುವವರಿಗೆ ಕೇಂದ್ರದ ಎಚ್ಚರಿಕೆ; ಈ ಆವೃತ್ತಿ ಬಳಸುತ್ತಿದ್ದರೆ ತಕ್ಷಣ ಬದಲಿಸಿ
Summary
ವಾಟ್ಸಾಪ್ ಬಳಸುವವರಿಗೆ ಕೇಂದ್ರದ ಎಚ್ಚರಿಕೆ; ಈ ಆವೃತ್ತಿ ಬಳಸುತ್ತಿದ್ದರೆ ತಕ್ಷಣ ಬದಲಿಸಿ - Pratidhvani ನವದೆಹಲಿ : ಭಾರತ ಸೇರಿದಂತೆ ವಿಶ್ವಾದ್ಯಂತ ಕೋಟ್ಯಂತರ ಜನರು ಬಳಸುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಬಳಕೆದಾರರಿಗೆ ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆಯಾದ 'ಸರ್ಟ್-ಇನ್' (CERT-In) ಗಂಭೀರ ಎಚ್ಚರಿಕೆ (Security Alert) ನೀಡಿದೆ. ವಾಟ್ಸಾಪ್‌ನ ವಿವಿಧ ಆವೃತ್ತಿಗಳಲ್ಲಿ ಕಂಡುಬಂದಿರುವ ತಾಂತ್ರಿಕ ಲೋಪದೋಷಗಳ (Technical Vulnerabilities) ಲಾಭ ಪಡೆದು, ಸೈಬರ್ ಹ್ಯಾಕರ್‌ಗಳು (Cyber Hackers) ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ. ಈ ಅಪಾಯವನ್ನು 'ಅತ್ಯಂತ ಗಂಭೀರ' (High Severity) ವರ್ಗದಲ್ಲಿ ಇರಿಸಲಾಗಿದ್ದು, ಕೇವಲ ಮೊಬೈಲ್ ಫೋನ್‌ಗಳು ಮಾತ್ರವಲ್ಲದೆ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ವಾಟ್ಸಾಪ್ ಬಳಸುವವರೂ ಕೂಡ ಈ ಸೈಬರ್ ದಾಳಿಗೆ ತುತ್ತಾಗುವ ಭೀತಿಯಿದೆ.
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.